Sunday, July 26, 2020

ASSIGNMENT 9 ವೃತ್ತಿನೈಪುಣ್ಯತೆ ಹೆಚ್ಚಿಸಿಕೊಂಡ ಬಗ್ಗೆ ಕುರಿತು ಟಿಪ್ಪಣಿ - ಭಾರತಿ ಟಿ.ಆರ್.


ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ ನ ಅವಧಿಯಲ್ಲಿ ನಿರ್ವಹಿಸಿದ ಗೃಹ ಕೃತ್ಯಗಳ ವಿವರ

ಸರ್ಕಾರಿ  (ಬಾಲಕಿಯರ),ಸಿರುಗುಪ್ಪ-583121

ಅಸೈನ್ಮೆಂಟ್-9

ಶಿಕ್ಷಕರ ಹೆಸರು

ಭಾರತಿ ಟಿ. ಎಂ ಸ್ಸಿ. ಬಿ ಇಡಿ

ಬೋದಿಸುತ್ತಿರುವ ವಿಷಯ

ಗಣಿತ

ವರ್ಕ್ ಫ್ರಮ್ ಹೋಮ್ ಅಡಿಯಲ್ಲಿ ವೃತ್ತಿನೈಪುಣ್ಯತೆ ಹೆಚ್ಚಿಸಿಕೊಳ್ಳಲು ಹೇಗೆ ಬಳಸಿಕೊಂಡಿರಿ? ಕುರಿತು 400 ಪದಗಳ ಟಿಪ್ಪಣಿ

 

ಮೊದಲನೇ ಹಂತದ ವರ್ಕ ಫ್ರಂ ಹೋಂ ಇದು ಆರು ಉಪವಿಷಯಗಳನ್ನು ಹೊಂದಿತ್ತು. ಮೊದಲನೆಯದಾಗಿ ಶಾಲಾ ಅಭಿವೃದ್ದ ಯೋಜನೆ ಸಿದ್ದ ಪಡಿಸುವುದು, ಇದರಿಂದ  ಶಾಲಾ ಸಮುದಾಯದೊಂದಿಗೆ ನಮ್ಮ ಬಾಂದವ್ಯ ವೃದ್ದಿಸಿತು.

2.ವಿದ್ಯಾರ್ಥಿ ಕೃತಿ ಸಂಪುಟ-ಇದರಿಂದ ಪ್ರತಿ ವಿದ್ಯಾರ್ಥಿಯ ವೈಯುಕ್ತಿಕ ವಿವರ ಮತ್ತು ವಿದ್ಯಾರ್ಥಿಯ ವೈಯುಕ್ತಿಕ ಆಸಕ್ತಿಯ ಬಗ್ಗೆ ತಿಳಿದುಕೊಂಡೆವು. ಕಲಿಕೆಯ ಪ್ರಕ್ರಿಯೆಯಲ್ಲಿ ಇದು ಅತ್ಯಂತ ಅವಶ್ಯಕವಾಗಿದೆ.

3.ವ್ಯಕ್ತಿ ಅಧ್ಯಯನ – ಇದರಿಂದ ಆ ವಿದ್ಯಾರ್ಥಿಯ ಕಲಿಕಾನ್ಯೂನ್ಯತೆಗಳಿದ್ದಲ್ಲಿ ಅದರ ಕೂಲಂಕುಶ ಮಾಹಿತಿ ಮತ್ತು ಅದಕ್ಕೆ ಪರಿಹಾರವನ್ನು ಶಿಕ್ಷಕರು ಯಾವ ರೀತಿ ನೀಡಬಹುದು ಎಂಬುದು ತಿಳಿದುಕೊಂಡೆವು.

4.ಶಿಕ್ಷಣದ ಬಗ್ಗೆ ಅಂಕಣ- ಇದರಿಂದ ನಾವು ಓದುವ ಕೌಶಲ್ಯವನ್ನು ಪುನಃ ವೃಧ್ದಿಸಿಕೊಳ್ಳಲು ಸಹಕಾರಿಯಾಯಿತು.

5.ಪುಸ್ತಕದ ಪರಾಮರ್ಶೆ – ಗ್ರಂಥಗಳನ್ನು ಓದುವೆಡೆ ನಮ್ಮನ್ನು ಕರೆದೊಯ್ಯಿತು.

6.ಇ-ತಂತ್ರಜ್ಞಾನಕ್ಕೆ ತೆರೆದುಕೊಳ್ಳುವುದು- ಇಂದಿನ ಪೀಳಿಗೆಗೆ ಅತ್ಯಂತ  ಅಗತ್ಯವಾಗಿ ಬೇಕಾಗಿರುವ ತಂತ್ರಜ್ಞಾನ ಬಳಕೆಯನ್ನು ಕಲಿಕಾ ಪ್ರಕ್ರಿಯೆ ಯಲ್ಲಿ ಯಾವ ರೀತಿ ಅಳವಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಹೆಚ್ಚು ಜ್ಞಾನ ಹೊಂದುವಂತೆ ಮಾಡಿತು.

ಎರಡನೇ ಹಂತದ ವರ್ಕ್ ಫ್ರಂ ಹೋಂ  ಇದು ನಮ್ಮನ್ನು ಪುನಃ ಶಿಕ್ಷಣ ಕ್ಷೇತ್ರದಲ್ಲಿ ಅಪ್ ಡೇಟ್ ಆಗುವಂತೆ ಮಾಡಿದೆ.ಈಗಲೇ ಶಿಕ್ಷಕರು ಎಲ್ಲಾ ಕಲಿಕೋಪಕರಣಗಳನ್ನು ಹೊಂದುವುದರಿಂದ , ಭವಿಷ್ಯದಲ್ಲಿ ದೊರೆಯುವ ಕಡಿಮೆ ಸಮಯದಲ್ಲಿಯೂ ಸಹ  ದಕ್ಷತೆಯಿಂದ ಪಾಠ ಪ್ರವಚನಗಳಲ್ಲಿ ತೊಡಗಿಕೊಳ್ಳಲು, ಮತ್ತು ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡಲು ಅತ್ಯಂತ ಸಹಕಾರಿಯಾಗಿದೆ. ಸಹೋದ್ಯೋಗಿಗಳೊಂದಿಗೆ ನಿಕಟ ಸಂಪರ್ಕ ಚರ್ಚೆ ಯಿಂದ ಜ್ಞಾನಾರ್ಜನೆಗೆ ಅನುಕೂಲವಾಗಿದೆ. ಅಂತರ್ ಜಾಲದ  ಬಳಕೆಗೆ ಪ್ರೋತ್ಸಾಹ ದೊರಕಿರುವುದರಿಂದ ಹೆಚ್ಚಿನ ಕಲಿಕೆಗೆ ಆಸ್ಪದವಾಗಿದೆ. ಸೇತುಬಂಧ ಕಾರ್ಯಕ್ರಮವು ದೂರದರ್ಶನವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವುದರಿಂದ ಶಿಕ್ಷಕರೂ, ಮತ್ತು ವಿದ್ಯಾರ್ಥಿಗಳೂ ವೀಕ್ಷಿಸಿ ಹಿಮ್ಮಾಹಿತಿ ಪಡೆಯಲು ಅನುಕೂಲವಾಗಿದೆ. ಮಕ್ಕಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಿದೆ.

ಶಿಕ್ಷಕರನ್ನು ನಿಂತ ನೀರಿನಂತಾಗದೆ ಜ್ಞಾನಾರ್ಜನೆಯ ವಾಹಿನಿಯಾಗಲು  ವರ್ಕ್ ಫ್ರಂ ಹೋಂ  ಸೇತುವೆ ಯಂತಾಗಿದೆ.

No comments:

Post a Comment

AUGUST 2020 SALARY

https://drive.google.com/file/d/13V31TrmRV4Onj6i7Q7p2dT_NS6Vp9NCe/view?usp=drivesdk