|
ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ ನ ಅವಧಿಯಲ್ಲಿ ನಿರ್ವಹಿಸಿದ ಗೃಹ ಕೃತ್ಯಗಳ ವಿವರ |
|
ಸರ್ಕಾರಿ ಪ್ರೌಢಶಾಲೆ (ಬಾಲಕಿಯರ)ಸಿರುಗುಪ್ಪ-583121 |
|
ಅಸೈನ್ಮೆಂಟ್-10 |
|
ಶಿಕ್ಷಕರ ಹೆಸ ರು : ಭಾರತಿ ಟಿ.ಆರ್. ಎಂ ಸ್ಸಿ. ಬಿ ಇಡಿ |
|
ಬೋಧಿಸುವ ವಿಷಯ : ಗಣಿತ |
|
ವಿಷಯ : ಕೋವಿಡ್.19 ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ
ಉತ್ಕೃಷ್ಟಗೊಳಿಸುವಲ್ಲಿ {ಕಲಿಕೆ ಪ್ರಕ್ರಿಯಲ್ಲಿ ಸದ ತೊಡಗುವಂತೆ ಮಾಡಲು} ತಮ್ಮ ಸಲಹೆ ಮತ್ತು ಕಾರ್ಯ ತಂತ್ರಗಳ ಪಟ್ಟಿ. 2019 ಡಿಸೆಂಬರ್ ತಿಂಗಳಿನಿಂದ ವಿಶ್ವದಾದ್ಯಂತ ಎಲ್ಲಾ ಜನರ ನಿದ್ದೆಗೆಡಿಸಿರುವ ಕರೋನಾ ವೈರಸ್ ವಿಶ್ವದಾದ್ಯಂತ ಪ್ರವೇಶ ಮಾಡಿದೆ. ಇದು ಸಾಂಕ್ರಾಮಿಕವಾಗಿ ರೋಗವನ್ನು ಹರಡುವ ವೈರಸ್ ಆಗಿದ್ದು, ಅತೀ ವೇಗವಾಗಿ ರೋಗವನ್ನು ಹರಡುವ ವೈರಸ್ ಇದಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಮೊದಲು ನಾವು ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಬೇಕಿದೆ. ನಮಗೆಲ್ಲಾ ತಿಳಿದಿರುವಂತೆ ಒಂದು ರಾಷ್ಟ್ರದ ಭವಿಷ್ಯದ ಪ್ರಗತಿಯು ಈಗಿನ ಮಕ್ಕಳ ಶಿಕ್ಷಣವನ್ನು ಅವಲಂಬಿಸಿದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಆದ್ದರಿಂದ ಶಿಕ್ಷಣ ಕ್ಷೇತ್ರದ ಒಂದು ಭಾಗವಾಗಿರುವ ಶಿಕ್ಷಕರು ಮಕ್ಕಳ ಕಲಿಕೆಯನ್ನುಉತ್ಕೃಷ್ಟಗೊಳಿಸಲು, ಮಕ್ಕಳನ್ನು ಕಲಿಕೆಯಲ್ಲಿ ತೊಡಗುವಂತೆ ಮಾಡಲು ಕೈ ಜೋಡಿಸಬಾಕಾಗಿದೆ. ಇಂತಹ ಅಪರಿಚಿತವಾದ ಮತ್ತು ಭಿನ್ನವಾದ ಪರಿಸ್ಥಿತಿಯಲ್ಲಿ ನಾವು ಅಂದರೆ ಶಿಕ್ಷಕರು ಕೆಲವು ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲೇಬೇಕಾಗಿದೆ. ಇದಕ್ಕಾಗಿ ವಯುಕ್ತಿಕವಾಗಿ ನನ್ನ ಕೆಲವು ಸಲಹೆಗಳು ಈ ಕೆಳಗಿನಂತಿವೆ. *ವಿದ್ಯಾರ್ಥಿಗಳ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ವ್ಯಾಟ್ಸ್ ಆಪ್ ಗ್ರೂಪ್ ರಚಿಸುವುದು. * ಮಕ್ಕಳಿಗೆ ತಮ್ಮ ವಯುಕ್ತಿಕ ಸ್ವಚ್ಚತೆ ಮತ್ತು ತಮ್ಮ ಪರಿಸರದ ಸ್ವಚ್ಚತೆಯ ಬಗ್ಗೆ ಕಾಳಜಿವಹಿಸುವಂತೆ ಮಾಡುವುದು.(ಇದಕ್ಕಾಗಿ ಮಕ್ಕಳೊಂದಿಗೆ ನಿರಂತರವಾಗಿ ದೂರವಾಣಿ ಸಂಪರ್ಕ ಹೊಂದುವುದು.) * ಸಾಮಾಜಿಕ ಮತ್ತು ದೌಹಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸುವುದು. *ಹೊರಗೆ ಹೋಗುವಾಗ ಮಾಸ್ಕ್ ಧರಿಸುವಂತೆ ಸೂಚಿಸುವುದು. * ಮನೆಯ ಹತ್ತಿರದ ಹಿರಿಯ ವಿದ್ಯಾರ್ಥಿಗಳಿಂದ ಪಥ್ಯಪುಸ್ತಕಗಳನ್ನು ಸಂಗ್ರಹಿಸುವುದು. *ಡಿ.ಡಿ.ಚಂದನದ ಆನ್ ಲೈನ್ ತರಗತಿಗಳನ್ನು ವೀಕ್ಷಿಸಿ, ನೋಟ್ ತಯಾರಿಸಿಕೊಳ್ಳುವುದು *ವ್ಯಾಟ್ಸ್ ಆಪ್ ಗ್ರೂಪ್ ನಲ್ಲಿ ತಮ್ಮ ವಿಷಯಗಳ ತರಗತಿಗಳ ಆಫ್ ಲೌನ್ ವಿಡಿಯೋಗಳನ್ನು ಮತ್ತು ಆಡಿಯೋಗಳನ್ನು ಅಪ್ ಲೋಡ್ ಮಾಡುವುದು *ಕ್ರಾಶ್ ಕೋರ್ಸ್ ತರಗತಿಗಳನ್ನು ನಡೆಸುವುದು : ಮಕ್ಕಳು ಮತ್ತು ಪೋಷಕರಿಂದ ಹಿಮ್ಮಾಹಿತಿ ಪಡೆಯುವುದು. *ಮಕ್ಕಳನ್ನು ದತ್ತು ಪಡೆದು , ತಮ್ಮ ಗುಂಪಿನ ಮಕ್ಕಳ ಆರೋಗ್ಯ ಮತ್ತು ಕಲಿಕೆಯ ಬಗ್ಗೆ ನಿರಂತರವಾಗಿ ದೂರವಾಣಿ ಸಂಪರ್ಕದಲ್ಲಿರುವುದು. *ಸಾದ್ಯವಾದಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಿಸುವಂತೆ ವಿಷಯಗಳ ಲಿಂಕ್ ಗಳನ್ನು ನೀಡುವುದರ ಮೂಲಕ ತಿಳಿಸುವುದು. * ಪರಿಸ್ಥಿತಿ ಸುಧಾರಿಸಿದ ನಂತರ ಪಾಳಿ ಪದ್ದತಿಯಲ್ಲಿ ತರಗತಿಗಳನ್ನು ನಡೆಸುವುದು.
|
No comments:
Post a Comment